Tuesday, December 23, 2008

ಮುಸ್ಲಿಮರು ಭಾರತದಲ್ಲಿ ನಿರ್ಲಕ್ಷಿಸಲ್ಪಟ್ಟಿದ್ದಾರೆಯೇ.. ?

`ಸಿಮಿ'ಯ ದ್ವೇಷ ರಾಜಕೀಯದ ಸವಾಲಿನ ಬಗ್ಗೆ ವ್ಯಾಖ್ಯಾನಿಸುತ್ತಾ `ದಿ ಹಿಂದೂ' ಪತ್ರಿಕೆಯು ತನ್ನ 2008ರ ಎಪ್ರಿಲ್ 1ರಂದು ಪ್ರಕಟವಾದ ಸಂಪಾದಕೀಯದಲ್ಲಿ ಹೀಗೆ ಬರೆದಿತ್ತು-
`ಸಫ್ದಾರ್ ನಾಗೋರಿ ಅವರು ತಾನೋರ್ವ ಭಾರತೀಯನಾಗಿರುವುದನ್ನು ದ್ವೇಷಿಸುತ್ತೇನೆ ಎಂದು ಬರೆದಿದ್ದರು. ಅವರು ತಲೆಮಾರಿನ ರೊಚ್ಚನ್ನು ಹೊರಗೆಡಹಿದರು. ಸಾಮಾಜಿಕ ಮತ್ತು ಆಥರ್ಿಕ ಸಮಾನತೆ, ನ್ಯಾಯದ ನಿರಾಕರಣೆಯಿಂದ ಉಂಟಾದ ಕಹಿ ಭಾವನೆ, ಕೋಮು ದುರಾಗ್ರಹ ಹೆಚ್ಚುತ್ತಿರುವ ಭಾವನೆ, 1980 ಮತ್ತು 1990ರ ದಶಕದಲ್ಲಿ ನಡೆದ ಕ್ರೂರ ಹಿಂಸಾಚಾರ, ಸಾಮೂಹಿಕ ಕಗ್ಗೊಲೆಗಳಿಂದ ಕ್ರೋಧಗೊಂಡ ಸಾವಿರಾರು ಯುವಜನರು ನಾಗೋರಿಯವರ `ಜಿಹಾದ್' ಕರೆಯಲ್ಲಿ ನ್ಯಾಯ ಒದಗಿಸುವ ವಾಗ್ದಾನವನ್ನು ಕಂಡರು. ಅಥವಾ ಕನಿಷ್ಟ ಪಕ್ಷ ಇದೊಂದು ಪ್ರತೀಕಾರದ ರೂಪ ಎಂದುಕೊಂಡರು'.
ಗ್ರಾಮೀಣ ಭಾರತದಲ್ಲಿ ಅಥವಾ ಭಾರತದ ಹಳ್ಳಿಗಾಡಿನಲ್ಲಿ, ಬುಡಕಟ್ಟು ಪಂಗಡದದಲ್ಲಿ, ನಗರ ಮತ್ತು ಪಟ್ಟಣದ ಕೊಳೆಗೇರಿಗಳಲ್ಲಿ ಮಿಲಿಯಗಟ್ಟಲೆ ಭಾರತೀಯರು ಅಂದಿನ ದುಡಿಮೆ ಅಂದಿನ ಕೂಳಿಗೆ ಎಂಬ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ತಮಗಾಗಿ ರೂಪಿತವಾಗಿರುವ ಎಲ್ಲಾ ನೆರವಿನ ಯೋಜನೆಗಳಿಂದ ಅವರು ವಂಚಿತರಾಗಿದ್ದಾರೆ ಅಥವಾ ನಾಗರಿಕ ಸಮಾಜ ಇವರನ್ನು . ಇವರು ಹತಾಶರಾಗಿದ್ದರೂ ತಮ್ಮ (ಹಣೆಬರಹ) ಅದೃಷ್ಟವನ್ನು ನಂಬಿಕೊಂಡಿದ್ದಾರೆ. ಸ್ವಸಹಾಯ ಕಾರ್ಯಕ್ರಮಗಳು ಕೆಲ ಮಟ್ಟಿಗೆ ನೆರವಾದರೂ, ಹೆಚ್ಚಿನ ಬದಲಾವಣೆಯನ್ನು ಉಂಟು ಮಾಡಿಲ್ಲ. ಬಹುತೇಕ ಭಾರತೀಯರು ಇರುವುದೇ ಹೀಗೆ.. ಅವರು ಬಡವರು, ಆದರೆ ತಮ್ಮ ನೆರವಿಗಾಗಿ ಏನನ್ನೂ ಮಾಡುತ್ತಿಲ್ಲ. ಇದೇ ವೇಳೆ ಅವರು ದೇಶದ ವಿರುದ್ಧ ಯುದ್ದವನ್ನೂ ಸಾರುವುದಿಲ್ಲ. ಕೆಲವರು ನಕ್ಸಲರಾಗಿರಬಹುದು. ಆದರೆ ತಾವು ಭಾರತೀಯನಾಗಿರುವುದನ್ನು ದ್ವೇಷಿಸುತ್ತೇನೆ ಎಂದು ಯಾರೂ ಹೇಳುವುದಿಲ್ಲ. ಆದರೆ ಭಾರತೀಯನಾಗಿರುವುದನ್ನು ದ್ವೇಷಿಸುತ್ತೇನೆ ಎನ್ನುವ ಸಫ್ದರ್ ನಾಗೋರಿ ಎಂಬ ಈ ಮನುಷ್ಯ ರಾಜದ್ರೋಹಿ ಮತ್ತು ರಾಷ್ಟ್ರವಿರೋಧಿಯಾಗಿದ್ದಾನೆ. ಜಗತ್ತು ವಿಶಾಲವಾಗಿದೆ. ನಾಗೋರಿ ತನಗಿಷ್ಟ ಬಂದೆಡೆ ಹೋಗಬಹುದು. ನಮಗೆ ಉಪದ್ರವ ಕೊಡಲಾಗುತ್ತಿದೆ ಎಂದು ಹೇಳಿ ಆಶ್ರಯ ಕೋರಿ ನೆಲೆಸಿರುವ ಭಾರತೀಯರಿದ್ದಾರೆ. ಈ ನಾಗೋರಿ ಕೂಡಾ ಪಾಕಿಸ್ತಾನದಲ್ಲಿ, ಮಧ್ಯಪೂರ್ವ ರಾಷ್ಟ್ರಗಳಲ್ಲಿ ಅಥವಾ ಪೂರ್ವದ ಇಸ್ಲಾಮಿಕ್ ದೇಶದಲ್ಲಿ ಆಶ್ರಯ ಕೋರಬಹುದು. ನಾಗೋರಿಯಂತಹ ವ್ಯಕ್ತಿಗಳು ವಿಷಜಂತುಗಳಂತೆ. `ಸಿಮಿ' ಚಟುವಟಿಕೆಯನ್ನು ಕಲುಷಿತಗೊಳಿಸಿದ ನಾಗೋರಿ ಮತ್ತು ಅವನಂತಹ ಸಹಚರರು ಈ ಸಮಾಜವನ್ನು ಮತ್ತಷ್ಟು ಒಡೆಯಲು ಮಾತ್ರ ಶಕ್ತರಾಗಬಹುದು. ಖಂಡಿತಾ ಮುಸಲ್ಮಾನರ ಉದ್ದೇಶಕ್ಕೆ ಇದು ನೆರವಾಗದು. ಅಲ್ಲದೆ, `ದಿ ಹಿಂದೂ'ವಿನಲ್ಲಿ ಬಂದ ರೀತಿಯ ಸಂದರ್ಶನಗಳು ಭಿನ್ನಮತವನ್ನು ಇನ್ನಷ್ಟು ಹಿರಿದುಗೊಳಿಸಬಹುದು.
ಮುಸ್ಲಿಂ ಸಮುದಾಯದ ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವ ಉದ್ದೇಶದಿಂದ ಆರಂಭವಾದ `ಸಿಮಿ', ಸಮುದಾಯದ ಯುವಕರ ಶ್ರೇಯೋಭಿವೃದ್ಧಿ ಮಾಡುವ ತನ್ನ ಉದ್ದೇಶಿತ ಗುರಿಯನ್ನು ವಿಳಂಬಿಸುತ್ತಿದೆ. ಹಿಂಸೆಯ ಮಾರ್ಗದ ಮೂಲಕ ಗುರಿ ಸಾಧಿಸಬಹುದು ಎಂದವರು ತಿಳಿದುಕೊಂಡಿದ್ದರೆ ಅದವರ ತಪ್ಪು ಭಾವನೆ. ಖಂಡಿತಾ ಅವರು ಯಶಸ್ವಿಯಾಗಲಾರರು. ಆದರೆ ಗಮನಾರ್ಹ ಅಂಶವೆಂದರೆ ಯಾವುದೇ ಕಾರ್ಯ ಚಟುವಟಿಕೆ ಇರಲಿ, ಅದಕ್ಕೆ ಆಥರ್ಿಕ ಬೆಂಬಲದ ಅಗತ್ಯವಿದೆ. ಅಂತೆಯೇ ಈ `ಸಿಮಿ'ಗೆ ಅನಿವಾಸಿ ಭಾರತೀಯರು ಹಾಗೂ ಅರಬ್ ಶ್ರೀಮಂತರ ಆಥರ್ಿಕ ನೆರವು ದೊರೆಯುತ್ತಿದೆ. ಇದೇ ಹಣವನ್ನು ಶೈಕ್ಷಣಿಕ ಹಾಗೂ ಇತರ ಸಾಮಾಜಿಕ ಚಟುವಟಿಕೆಗಳಿಗೆ ಬಳಸಿಕೊಂಡರೆ ಸಮುದಾಯವು ಅಭಿವೃದ್ಧಿ ಹೊಂದಬಹುದಿತ್ತು. ಆದರೆ ಅವರು ಈ ರೀತಿ ಮಾಡಲಿಲ್ಲ. ಅವರು ದ್ವೇಷದ ವ್ಯಾಪಾರಿಗಳಂತೆ ಮುಂದುವರಿದರು. ಇದರಿಂದ ಒಡಕು ಹೆಚ್ಚಾಗುತ್ತಾ ಸಾಗಿತು.
`ಮೂಲೆಗುಂಪು ಮಾಡುವಿಕೆ ಎಂಬ ವಿಷಯಕ್ಕೆ ಬರೋಣ. ಓರ್ವ ವ್ಯಕ್ತಿಯ ಬಗ್ಗೆ, ಬಹುಷ: ಹಿಂದು ಕೂಡಾ ಆಗಿರಬಹುದು, ನಾವು ಒಂದು ಲೇಖನ ಪ್ರಕಟಿಸಿದ್ದೇವೆ. `ಮೂಲೆಗುಂಪು ಮಾಡಲ್ಪಟ್ಟ' ಮೀನುಗಾರರ ಕುಟುಂಬದಲ್ಲಿ ಹುಟ್ಟಿದರೂ ಈತ ವಿದ್ಯಾಭ್ಯಾಸ ಪಡೆದ. ಸಾಧಾರಣ ವಿದ್ಯಾಥರ್ಿಯಾಗಿದ್ದರೂ ಹಂತಹಂತವಾಗಿ ಜೀವನದಲ್ಲಿ ಪ್ರಗತಿ ಸಾಧಿಸಿದ. ಈಗ ತನ್ನ ಸುತ್ತಮುತ್ತಲಿನ ಸಮಾಜದ ಮಂದಿಗೆ ತನ್ನಿಂದ ಸಾಧ್ಯವಾದಷ್ಟು ನೆರವು ನೀಡುತ್ತಿದ್ದಾನೆ. ತನ್ನ ಜಾತಿ ಅಥವಾ ಸರಕಾರದಿಂದ ಕಿಂಚಿತ್ತು ಸೌಲಭ್ಯ ಪಡೆಯದಿದ್ದರೂ, ತಾನೋರ್ವ ಭಾರತೀಯ ಎಂದು ಕರೆಸಿಕೊಳ್ಳಲು ಹೆಮ್ಮೆ ಪಡುತ್ತಿದ್ದಾನೆ.
ಸ್ವತಂತ್ರ ಭಾರತದಲ್ಲಿ ಬದುಕೆಂಬುದು ಎಲ್ಲರಿಗೂ ಮುಕ್ತವಾಗಿದೆ. ಇಲ್ಲಿ ಹಲವು ಮುಸಲ್ಮಾನರು ಅವಿರತ ಪರಿಶ್ರಮ ಹಾಗೂ ಕಠಿಣ ದುಡಿಮೆಯಿಂದ ಯಶ ಸಾಧಿಸಿದ್ದಾರೆ. ಹಾಗೂ ಇವರಲ್ಲಿ ಹೆಚ್ಚಿನವರು ಯಾವುದೇ ದೂರು, ಆಕ್ಷೇಪಗಳಿಗೆ ಆಸ್ಪದೆ ನೀಡದೆ ಸಮುದಾಯಕ್ಕೆ ಧನಾತ್ಮಕ ಕೊಡುಗೆಯೊಂದಿಗೆ, ಭಾರತೀಯ ಎಂದೆನಿಸಿಕೊಳ್ಳಲು ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ.
ಆದರೆ `ದಿ ಹಿಂದೂ'ವಿನಲ್ಲಿ ಬಂದಿದ್ದ ಈ ಸಂದರ್ಶನದ ರೀತಿಯ ಲೇಖನಗಳೇ ನಮ್ಮ ಮಾಧ್ಯಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸಾಮಾಜಿಕ ಮತ್ತು ಆಥರ್ಿಕ ಸಮಾನತೆಯನ್ನು ನಿರಾಕರಿಸಿರುವುದರಿಂದ ಸಮುದಾಯದ ಮಂದಿಯಲ್ಲಿ ಕಹಿ ಭಾವನೆಯಿದೆ ಎಂಬ ರೀತಿಯ ವರದಿಗಳಿವು.
ಖ್ಯಾತ ಇತಿಹಾಸತಜ್ಞ ಡಾ ಇಫರ್ಾನ್ ಹಬೀಬ್ ಅವರ ಮಾತನ್ನು ಇಲ್ಲಿ ಉಲ್ಲೇಖಿಸಬಹುದು- ಮುಸ್ಲಿಂ ಸಮುದಾಯದವರನ್ನು ಹಿಂದುಳಿದವರು ಎಂಬ ಹಣೆಪಟ್ಟಿಯಿಂದ ದೂರವಾಗಿಸಲು ಯತ್ನಿಸುವ ಬದಲು, ಮುಸ್ಲಿಂ ಪ್ರತ್ಯೇಕತಾವಾದವನ್ನು ಸಮಥರ್ಿಸುವುದೇ ಮುಸ್ಲಿಮರ ಪ್ರಮುಖ ಉದ್ದೇಶವಾಗಿದೆ. ಮುಸ್ಲಿಂ ಕೋಮುವಾದಿ ಶಕ್ತಿಗಳ ವಿರುದ್ಧ ಜಾಗೃತ ಸೈದ್ಧಾಂತಿಕ ಹೋರಾಟಕ್ಕೆ ಅವರು ಕರೆ ನೀಡಿದ್ದಾರೆ.
ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು ರಾಮೇಶ್ವರಂನ ನಿವಾಸಿ, ಹೆಚ್ಚಿನ ವಿದ್ಯಾಭ್ಯಾಸ ಪಡೆಯದ ಅಂಬಿಗ ವೃತ್ತಿಯ ಜೈನುಲಬ್ದೀನ್ ಎಂಬವರ ಮಗ. ಇವರದ್ದು ಸಾಮಾನ್ಯ ವರ್ಗದ ಕುಟುಂಬವಾಗಿತ್ತು. ಹಾಗಿದ್ದರೂ ಎಳೆಯ ಅಬ್ದುಲ್ ಕಲಾಂಗೆ ಯೋಗ್ಯ ಶಿಕ್ಷಣದ ವ್ಯವಸ್ಥೆ ಮಾಡಬೇಕೆಂಬುದು ಅವರ ತಂದೆ ತಾಯಿಗಳ ಬಯಕೆಯಾಗಿತ್ತು. ಜೀವನ ತನ್ನಷ್ಟಕ್ಕೆ ಸಾಗುತ್ತಿತ್ತು. ಕಲಾಂ ಬೆಳೆಯುತ್ತಿದ್ದಂತೆಯೇ ಭಾರತವಷ್ಟೇ ಅಲ್ಲ, ವಿಶ್ವದಲ್ಲಿಯೇ ಗುರುತಿಸಲ್ಪಡುವ ಮಹಾನ್ ವಿಜ್ಞಾನಿಯಾಗಿ ರೂಪುಗೊಂಡರು. `ರಾಕೆಟ್ ವಿಜ್ಞಾನಿ' ಎಂದೇ ಕರೆಯಲ್ಪಡುತ್ತಿದ್ದ ಕಲಾಂರನ್ನು ಈ ದೇಶ `ಭಾರತ ರತ್ನ' ಎಂದು ಗುರುತಿಸಿತು ಹಾಗೂ 2002ರ ಜುಲೈ 25ರಂದು ದೇಶದ 11ನೇ ರಾಷ್ಟ್ರಪತಿಯಾಗಿ ನೇಮಿಸಲು ಹೆಮ್ಮೆ ಪಟ್ಟುಕೊಂಡಿತು. ಒಟ್ಟು ಜನಸಂಖ್ಯೆಯ ಶೇ.80ರಷ್ಟು ಹಿಂದೂಗಳು ಇರುವ ಭಾರತದಲ್ಲಿ ಅಬ್ದುಲ್ ಕಲಾಂ ಅವರು ಮೂರನೇ ಮುಸ್ಲಿಂ ರಾಷ್ಟ್ರಪತಿಯಾದರು.
ವಿನೀತ ಹಿನ್ನೆಲೆಯ ಕುಟುಂಬದಲ್ಲಿ ಹುಟ್ಟಿ ಬಂದ ಎಪಿಜೆ ಅಬ್ದುಲ್ ಕಲಾಂ ಈ ದೇಶದ ಅತ್ಯುನ್ನತ ಹುದ್ದೆಗೇರಿದರು. ಇದೇ ರೀತಿ ಕೆ. ಆರ್. ನಾರಾಯಣನ್ ಅವರು.. ವಯನಾಡಿನಂತಹ ಹೆಸರೇ ಕೇಳಿರದ ಪ್ರದೇಶದಿಂದ ಬಂದವರು ಸುಪ್ರಸಿದ್ಧ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ನಲ್ಲಿ ಓದಿ ಉಪರಾಷ್ಪ್ರಪತಿಗಳ ಅರಮನೆಗೆ ಪ್ರವೇಶಿಸಿದರು. ಕೇವಲ ಬದ್ಧತೆ ಮತ್ತು ಕಠಿಣ ಪರಿಶ್ರಮ ಈ ಇಬ್ಬರು ಮಹನೀಯರನ್ನು ಕೀತರ್ಿಯ ಶಿಖರಕ್ಕೇರಿಸಿತು. ಕಷ್ಟ-ನಷ್ಟ ಎದುರಿಸಿ, ಸಂಕಷ್ಟದಲ್ಲೇ ಬೆಳೆದರೂ ಈ ಇಬ್ಬರು ಮಹನೀಯರು ದೇಶವನ್ನು ದೂರಲು ಹೋಗಲಿಲ್ಲ. ಇಂಚು ಇಂಚಿಗೂ ತಾವು ಭಾರತೀಯರು ಎನಿಸಿಕೊಳ್ಳಲು ಇವರಿಗೆ ಹೆಮ್ಮೆಯಿತ್ತು ಮತ್ತು ತಮ್ಮ ಪರಿಶುದ್ಧ ಮತ್ತು ಆದರ್ಶ ಜೀವನಕ್ರಮದಿಂದ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಟ್ಟುಕೊಳ್ಳುವಂತಹ ಸಾಧನೆ ಮಾಡಿದರು.
ತಮ್ಮ ಸ್ಮರಣಾರ್ಹ ಚಿಂತನೆಗಳ ಸಾರ-ವಿಂಗ್ಸ್ ಆಫ್ ಫೈರ್(ಅಗ್ನಿಯ ರೆಕ್ಕೆಗಳು) ಕೃತಿಯಲ್ಲಿ ಕಲಾಂ ಹೀಗೆ ಬರೆದಿದ್ದಾರೆ: ನನ್ನ ತಂದೆಯಿಂದ ಪ್ರಾಮಾಣಿಕತೆ ಮತ್ತು ಶಿಸ್ತು, ಒಳ್ಳೆಯತನ ಮತ್ತು ಸೌಜನ್ಯದಲ್ಲಿ ನಂಬಿಕೆ ತಾಯಿಯಿಂದ ಬಳುವಳಿಯಾಗಿ ಪಡೆದಿದ್ದೇನೆ. ಸಂಪ್ರದಾಯಸ್ಥ ಬ್ರಾಹ್ಮಣ ವಂಶಸ್ಥರಾದ ತನ್ನ ಮೂವರು ಗೆಳೆಯರ ಬಗ್ಗೆ, ಹಾಗೂ ಈ ಗೆಳೆಯರಲ್ಲಿ ಓರ್ವನ ತಂದೆ( ರಾಮೇಶ್ವರಂ ದೇವಸ್ಥಾನದಲ್ಲಿ ಮುಖ್ಯ ಅರ್ಚಕರಾಗಿದ್ದರು) ಮತ್ತು ತನ್ನ ತಂದೆಯವರ ನಡುವಿನ ಗೌರವಾನ್ವಿತ ಸ್ನೇಹ ಸಂಬಂಧದ ಬಗ್ಗೆ ಅವರು ಹೇಳುತ್ತಾರೆ.
ಇನ್ನೊಂದು ಘಟನೆ ಹೀಗಿದೆ: ಒಮ್ಮೆ ತರಗತಿಯಲ್ಲಿ ಶಿಕ್ಷಕರೋರ್ವರು ಕಲಾಂರನ್ನು ಮುಂದಿನ ಬೆಂಚ್ನಲ್ಲಿ ಕುಳಿತುಕೊಳ್ಳದೆ, ಹಿಂದಿನ ಬೆಂಚ್ಗೆ ಹೋಗಿ ಕೂರಲು ಹೇಳಿದರು. ಇದು ಕಲಾಂ ಹಾಗೂ ಅವರ ಬ್ರಾಹ್ಮಣ ಗೆಳೆಯರಿಗೆ ತುಂಬಾ ನೋವುಂಟು ಮಾಡಿತು. ಆಗ ರಾಮೇಶ್ವರಂ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮಣ ಶಾಸ್ತ್ರಿ ಅವರು, ಆ ಶಿಕ್ಷಕರನ್ನು ಕರೆದು ಕ್ಷಮೆ ಕೇಳುವಂತೆ ನಿದರ್ಾಕ್ಷಿಣ್ಯವಾಗಿ ತಿಳಿಸಿದರು. ಅಥವಾ ಎಳೆಯ ಮಕ್ಕಳಲ್ಲಿ ಅಶಾಂತಿಯ ಭಾವನೆ ಮೂಡಿಸಿ ಶಾಲೆಯ ವಾತಾವರಣವನ್ನು ಕಲುಷಿತಗೊಳಿಸಿದ್ದಕ್ಕಾಗಿ ಶಾಲೆಯನ್ನು ಬಿಟ್ಟು ತೊಲಗುವಂತೆ ಸೂಚಿಸಿದರು. ಇನ್ನೊಂದು ಘಟನೆಯನ್ನೂ ಅವರು ನೆನಪಿಸಿಕೊಳ್ಳುತ್ತಾರೆ. ಓರ್ವ ಸಂಪ್ರದಾಯವಾದಿ ಬ್ರಾಹ್ಮಣರಾಗಿದ್ದ, ಆದರೆ ಕ್ರಾಂತಿಕಾರಿ ಮನೋಭಾವ ಹೊಂದಿದ್ದ, ಇವರ ವಿಜ್ಞಾನ ಶಿಕ್ಷಕರು ಕಲಾಂರವರ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಇವರೊಮ್ಮೆ ಕಲಾಂರನ್ನು ಊಟಕ್ಕೆಂದು ಮನೆಗೆ ಆಹ್ವಾನಿಸಿದರು. ಪ್ರಥಮ ಬಾರಿ ಕಲಾಂರಿಗೆ ಬಡಿಸಲು ಆ ಬ್ರಾಹ್ಮಣ ಶಿಕ್ಷಕರ ಪತ್ನಿ ನಿರಾಕರಿಸಿದರು. ಆದರೆ ಊಟ ಆರಂಭಿಸುವ ಮೊದಲು ಹಾಗೂ ಊಟವಾದ ಬಳಿಕ ಕಲಾಂ ಅನುಸರಿಸಿದ ಧಾಮರ್ಿಕ ವಿಧಿಗಳಿಂದ ಸಂಪ್ರೀತರಾದ ಈಕೆ ಎರಡನೇ ಬಾರಿ ಕಲಾಂರಿಗೆ ಕೈಯಾರೆ ಊಟವನ್ನು ಬಡಿಸಿದರು.
ಉನ್ನತ ವಿದ್ಯಾಭ್ಯಾಸಕ್ಕಾಗಿ ಕಲಾಂ ಅವರು ರಾಮನಾಥಪುರಂಗೆ ತೆರಳುವ ಸಂದರ್ಭ ಬಂತು. ಈ ಸಂದರ್ಭದಲ್ಲಿ ತಂದೆ ಹೇಳಿದ ಮಾತನ್ನು ಅವರು ಜ್ಞಾಪಿಸಿಕೊಳ್ಳುತ್ತಾರೆ. ನಮ್ಮ ಪ್ರೀತಿ ನಿನ್ನನ್ನು ಕಟ್ಟಿ ಹಾಕದು ಅಥವಾ ನಮ್ಮ ಅವಶ್ಯಕತೆ ನಿನ್ನನ್ನು ತಡೆಯದು ಎಂದರು ತಂದೆಯವರು.
ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ಜೀವನದ ಹೆಬ್ಬಯಕೆಯ ಮಕ್ಕಳಾಗಿದ್ದಾರೆ. ನಿಮ್ಮ ಪ್ರೀತಿಯನ್ನು ಅವರಿಗೆ ನೀವು ನೀಡಬಹುದು. ಆದರೆ ನಿಮ್ಮ ಅಭಿಪ್ರಾಯಗಳನ್ನಲ್ಲ. ಅವರಿಗೆ ಅವರದ್ದೇ ಆದ ಅಭಿಪ್ರಾಯಗಳಿವೆ ಎಂಬ ಖಲೀಲ್ ಗಿಬ್ರಾನ್ ಅವರ ಉಕ್ತಿಯನ್ನು ತಾಯಿ ಉಲ್ಲೇಖಿಸಿದರು. ಖಲೀಲ್ ಗಿಬ್ರಾನ್ ಓರ್ವ ಅರಬ್ ಕ್ರೈಸ್ತ ಎಂಬುದನ್ನು ಗಮನಿಸಿ.
ಕಲಾಂಗೆ ರಾಮನಾಥಪುರಂನಲ್ಲಿ ಮನೆಯ ನೆನಪಾಗತೊಡಗಿತು. ಅಲ್ಲಿಯ ಸುಸಂಬದ್ಧ, ಸ್ನೇಹಮಯಿ ವಾತಾವರಣ ಪದೇ ಪದೇ ನೆನಪಿಗೆ ಬರತೊಡಗಿತು.
ಹೊಸ ವಾತಾವರಣಕ್ಕೆ ಶತಾಯ ಗತಾಯ ಹೊಂದಿಕೊಳ್ಳಬೇಕೆಂದು ನಾನು ಧೃಡ ಸಂಕಲ್ಪ ಮಾಡಿದ್ದೆ. ಯಾಕೆಂದರೆ ತಂದೆ ನನ್ನ ಯಶಸ್ಸಿನ ಮೇಲೆ ಬಹಳಷ್ಟು ನಿರೀಕ್ಷೆ ಇರಿಸಿಕೊಂಡಿದ್ದರು. ತಂದೆಯವರು ನನ್ನಲ್ಲಿ ಓರ್ವ ಜಿಲ್ಲಾಧಿಕಾರಿ ರೂಪುಗೊಳ್ಳುವುದನ್ನು ನೋಡಲು ಬಯಸುತ್ತಿದ್ದರು ಹಾಗೂ ತಂದೆಯವರ ಕನಸು ನನಸಾಗಿಸುವುದು ನನ್ನ ಕರ್ತವ್ಯ ಎಂದು ನಾನಂದುಕೊಂಡಿದ್ದೆ. ಅದೇನೇ ಇದ್ದರೂ ರಾಮೇಶ್ವರಂನ ಆ ಅನ್ಯೋನ್ಯ, ಸುಭದ್ರತೆಯ ಭಾವನೆ ಮೂಡಿಸುವ ಪರಿಸರದಿಂದ ನಾನು ವಂಚಿತನಾಗಿದ್ದೆ ಎನ್ನುತ್ತಾರೆ ಕಲಾಂ.
ಬಳಿಕ ನಡೆದದ್ದು ಇತಿಹಾಸವಾಗಿದೆ. ಡಾ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ತನ್ನ ಸಮಕಾಲೀನರಲ್ಲಿ ಓರ್ವ ಅತ್ಯುನ್ನತ ಗಣ್ಯವ್ಯಕ್ತಿಯಾಗಿ, ಈ ದೇಶ ಕಂಡ ಓರ್ವ ಅತ್ಯುತ್ತಮ ಮುಸಲ್ಮಾನರಾಗಿ ರೂಪುಗೊಂಡರು. ಇಂತಹ ಮಹಾನ್ ವ್ಯಕ್ತಿಯನ್ನು ಭಾರತೀಯನಾಗಿ ಹುಟ್ಟಿದುದಕ್ಕೆ ಅತೀವ ಬೇಸರ ಪಟ್ಟುಕೊಂಡಿರುವ ಸಫ್ದಾರ್ ನಾಗೋರಿಗೆ ಹೋಲಿಸಬಹುದೇ? ಅಥವಾ, ನಾಗೋರಿಯಂತಹ ಮಗನನ್ನು ಹೊಂದಿರುವುದಕ್ಕೆ ಭಾರತಮಾತೆ ಬೇಸರಿಸಿಕೊಂಡಿದ್ದಾಳೆ ಎನ್ನಬಹುದೇ? `ದಿ ಹಿಂದೂ'ವಿನಲ್ಲಿ ಪ್ರಕಟವಾದ ಈ ಸಂದರ್ಶನವು ನಾಗೋರಿಯಂತವರನ್ನು ಸಮಾಧಾನ ಪಡಿಸುವ ಪ್ರಯತ್ನವಾಗಿತ್ತು. ಸ್ಥಿರವಾಗಿ, ಸದೃಢವಾಗಿ ವಿಕಸಿತಗೊಳ್ಳುತ್ತಿರುವ ಭಾರತಕ್ಕೆ ಈ ರಈತಿಯ ಪತ್ರಿಕಾ ಮನೋವೃತ್ತಿ ಅಪಾಯಕಾರಿಯಾಗಿದೆ. ಪ್ರತಿಯೋರ್ವ ಭಾರತೀಯ ಹೆಮ್ಮೆ ಪಟ್ಟುಕೊಳ್ಳಬೇಕಾದ ಡಾ ಎಪಿಜೆ ಅಬ್ದುಲ್ ಕಲಾಂರಂತಹ ಆದರ್ಶ ವ್ಯಕ್ತಿಗಳ ಬಗ್ಗೆ ಬರೆಯುವುದು ಪತ್ರಿಕೆಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಕಲಾಂ ಯಾವುದೇ ಮೀಸಲಾತಿಗೆ ಆಗ್ರಹಿಸದೆ, ಸಾಚಾರ್ ಸಮಿತಿಯ ರೀತಿಯಲ್ಲಿ ರಾಜಕೀಯ ಬೆಂಬಲವಿಲ್ಲದೆ ಬೆಳೆದರು. ದೇಶವು ವ್ಯಕ್ತಿಗಿಂತ ಮಿಗಿಲು ಎಂದವರು ಹೇಳಿಲ್ಲವೇ? ಕ್ಷಿಪಣಿ ತಂತ್ರಜ್ಞಾನಕ್ಕೆ ಅವರು ನೀಡಿದ ಅಮೋಘ ಕೊಡುಗೆಗಾಗಿ ದೆಶವು ಅವರನ್ನು `ಭಾರತ ರತ್ನ' ಎಂದು ಗುರುತಿಸಿತು. ಇಷ್ಟೇ ಅಲ್ಲ, ಅವರನ್ನು ದೇಶದ ಪ್ರಥಮ ಪ್ರಜೆಯ ಪಟ್ಟಕ್ಕೆ ಏರಿಸಿದಾಗ ಇಡೀ ದೇಶವೇ ಸಂಭ್ರಮಿಸಿಲ್ಲವೇ? ಡಾ ಕಲಾಂ ಅವರು ದೇಶದ ಭವಿಷ್ಯದ ರಾಷ್ಟ್ರಪತಿಗಳಿಗೆ ಹಾಕಿಕೊಟ್ಟ ಧನಾತ್ಮಕ ನಿದರ್ಶನಗಳನ್ನು ಮಾಧ್ಯಮಗಳು ಗುರುತಿಸಬಾರದೇ? ಕಲಾಂ ರಾಷ್ಟ್ರಪತಿ ಚುನಾವಣೆಗೆ ಸ್ಪಧರ್ಿಸುವಾಗ ಠೇವಣಿಯನ್ನು ತಮ್ಮ ಸ್ವಂತ ಹಣದಿಂದ ನೀಡಿದವರು. ರಾಷ್ಟ್ರಪತಿ ಭವನದ ದೈನಂದಿನ ಖಚರ್ು ವೆಚ್ಚಗಳನ್ನು ಗಣನೀಯವಾಗಿ ಕಡಿತಗೊಳಿಸಿದರು. ಕಲಾಂ ರಾಷ್ಟ್ರಪತಿ ಆಗಿದ್ದ ಅವಧಿಯಲ್ಲಿ ಅವರ ಕುಟುಂಬ ವರ್ಗದವರು ಬಹುಷಃ ಒಂದು ಬಾರಿ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ ಅಲ್ಲಿ ತಂಗಿದ್ದರು. ಇದರ ಪೈಸೆ ಪೈಸೆ ವೆಚ್ಚವನ್ನೂ ಲೆಕ್ಕ ಮಾಡಿ ಚುಕ್ತಾ ಮಾಡಿದ್ದರು ಕಲಾಂ. ಎಳೆಯ ತಲೆಮಾರಿಗೆ ಸ್ಫೂತರ್ಿದಾಯಕ ಹಾಗೂ ಮಾರ್ಗದರ್ಶಕವಾದ ಇವರ ಜೀವನದ ಬಗ್ಗೆ ನಮ್ಮ ಶಾಲೆಗಳ ಇತಿಹಾಸ ಪಠ್ಯದಲ್ಲಿ ಲೇಖನ ಸೇರಿಸಬೇಕು. ಒಂದು ಕಡೆ ಸಫ್ದಾರ್ ನಾಗೋರಿಯಂತಹ ವ್ಯಕ್ತಿಗಳಿದ್ದರೆ ಇನ್ನೊಂದೆಡೆ ಡಾ ಕಲಾಂರಂತಹ ಸ್ಫೂತರ್ಿದಾಯಕ ಚೇತನಗಳಿದ್ದಾರೆ. ಜತೆಗೆ, ಮಾಧ್ಯಮ ಸೃಷ್ಠಿಸಿದ ವಕ್ತಾರರಾದ `ಸಿಮಿ'ಯ ಹಿರಿಯ ನಾಯಕ ಡಾ ಶಾಹಿದ್ ಬದ್ರ್ ಫಲಾಹಿ, ಜಮೀಯಾ ಮಿಲಿಯಾ ಇಸ್ಲಾಮಿಯಾದ ಉಪಕುಲಪತಿ, ಶಿಕ್ಷಣ ತಜ್ಞ ಪ್ರೊ ಮುಷೀರುಲ್ ಹಸನ್ರಂತವರು. ಇತ್ತೀಚೆಗೆ `ದಿ ವೀಕ್'ಗೆ ನೀಡಿದ ಸಂದರ್ಶನದಲ್ಲಿ (ಈ ಸಂದರ್ಶನಕ್ಕೆ ಮಹತ್ವವಿದೆಯೇ ಎಂಬುದು ಬೇರೆ ಪ್ರಶ್ನೆ), ನಿದರ್ಿಷ್ಟವಾಗಿ ಕೇಳಲಾದ ಪ್ರಶ್ನೆಗೆ ಈ ಶಿಕ್ಷಣ ತಜ್ಞರು ಹೇಳಿದ್ದು-ಬಜರಂಗದಳವನ್ನು ನಿಷೇಧಿಸಬೇಕು ಎಂದು. ಆದರೆ ಸಂದರ್ಶಕರು `ಸಿಮಿ'ಯ ನಿಷೇಧ ಮುಂದುವರಿಯಬೇಕೇ ಎಂಬ ನಿದರ್ಿಷ್ಟ ಪ್ರಶ್ನೆ ಕೇಳಲಿಲ್ಲ. ಇನ್ನೋರ್ವ ವ್ಯಕ್ತಿ ಹಿಂದೂ `ಫ್ಯಾಸಿಸ್ಟ್'ಗಳು `ಸಿಮಿ'ಯ ಮೇಲೆ ದೋಷಾರೋಪಣೆ ಮಾಡಲು ಬಯಸುತ್ತವೆ ಎನ್ನುತ್ತಾ `ಸಿಮಿ'ಯ ವಿಷವನ್ನು ಹೊರ ಕಾರಿಬಿಟ್ಟ. ದೇಶದ ಪ್ರಸ್ತುತ ಸಮಸ್ಯೆಗಳ ಹೊಣೆಯನ್ನು ಹಿಂದೂ ಸಂಘಟನೆಗಳ ಮೇಲೆ ಹೊರಿಸಲು ಇಬ್ಬರು ವ್ಯಕ್ತಿಗಳು ಒತ್ತಾಯಪೂರ್ವಕವಾಗಿ ಯತ್ನಿಸಿದರು.
ಈ ಇಬ್ಬರು ವಕ್ತಾರರ ದೃಷ್ಟಿಕೋನಗಳನ್ನು ನಿರೂಪಿಸುವಲ್ಲಿ ಒಂದು ಬಚ್ಚಿಟ್ಟ ಅಜೆಂಡಾ(ಕಾರ್ಯಸೂಚಿ) ಇತ್ತೇ ಎಂಬ ಸಂಶಯ ಇಲ್ಲಿ ಎದ್ದು ಕಾಣುತ್ತಿತ್ತು. ಯಾವುದೇ ತಪ್ಪು ಕಾರ್ಯದ ಬಗ್ಗೆ ಹಿಂದೂ ಸಂಘಟನೆಯನ್ನು ದೂರುವುದು ನಿಜವಾಗಿಯೂ ಸುಲಭವಲ್ಲ. ಆದರೆ `ಸಿಮಿ'ಯಲ್ಲಿ ಯಾವುದೇ ತಪ್ಪು ಇಲ್ಲ ಎಂಬ ಡಾ ಫಲಾಹಿ ಅವರ ಹೇಳಿಕೆ ಸತ್ಯವನ್ನು ಮರೆಮಾಚುವ ವಿಷಯ. ಟೈಮ್ಸ್ ಆಫ್ ಇಂಡಿಯಾದ ಎಸ್.ಅಹ್ಮದ್ ಅಲಿ ಅವರು -ಮಧ್ಯಪೂರ್ವ ರಾಷ್ಟ್ರಗಳಿಂದ ಭಯೋತ್ಪಾದಕ ಹಣ' ಎಂಬ ಲೇಖನದಲ್ಲಿ -ಹವಾಲಾ ಸಾಗಾಟಗಾರರಲ್ಲಿ ಇಬ್ಬರು ಮುಂಬೈಯ ಕುಲರ್ಾದಲ್ಲಿರುವ ಪೈಪ್ರೋಡ್ ಪ್ರದೇಶದವರು(ಇಲ್ಲಿ ಈ ಹಿಂದೆ ಸಿಮಿಯ ಕಚೇರಿ ಇತ್ತು ಹಾಗೂ ಮುಖ್ಯ ಸೂತ್ರಧಾರ ರಿಯಾಝ್ ಭಟ್ಕಳ ಇಲ್ಲೇ ವಾಸಿಸುತ್ತಿದ್ದ). ಭಟ್ಕಳದ ಇಬ್ಬರು ಸೋದರರಾದ ರಿಯಾಝ್ ಮತ್ತು ಇಕ್ಬಾಲ್ ಸಿಮಿಯ ಪ್ರಭಾವೀ ನಾಯಕರಾಗಿ ಬೆಳೆದರು ಹಾಗೂ ಮಹಾರಾಷ್ಟ್ರ ಸರಕಾರ 2001ರಲ್ಲಿ ಸಿಮಿ ಕಚೇರಿಯನ್ನು ಸೀಲ್ ಮಾಡುವವರೆಗೆ ಈ ಕಚೇರಿಯ ಕಾರ್ಯವನ್ನು ನಿರ್ವಹಿಸಿದರು. ಡಾ ಫಲಾಹಿ ಅವರ ಹೇಳಿಕೆಯನ್ನು ಇದು ಸಂಪೂರ್ಣ ಕೊಳಕುಗೊಳಿಸಿತು. ಡಾ ಫಲಾಹಿಗೆ ಮೂರು ಪ್ರಶ್ನೆಗಳನ್ನು ಕೇಳಲಾಗಿತ್ತು. 1) ಮುಂಬೈ ಮತ್ತು ದಿಲ್ಲಿಯಲ್ಲಿ ನಡೆದ ಸ್ಫೋಟದ ಹಿನ್ನಲೆಯಲ್ಲಿ ಬಂಧಿಸಲ್ಪಟ್ಟವರು ಸಿಮಿ ಜೊತೆವ ನಂಟು ಹೊಂದಿದ್ದಾರೆ 2) ಈ ಸ್ಫೋಟದ ಹಿಂದೆ `ಸಿಮಿ'ಯ ಕೈವಾಡವಿದೆಯೇ? 3) ಸ್ಫೋಟದ ಆರೋಪಿಗಳು ಸಿಮಿ ಸದಸ್ಯರೇ?
ಈ ಎಲ್ಲಾ ಪ್ರಶ್ನೆಗಳಿಗೂ ಫಲಾಹಿ ಅವರ ಉತ್ತರ ಒಂದೇ ಆಗಿತ್ತು-ಇವರು ಸಿಮಿ ಸದಸ್ಯರಲ್ಲ ಮತ್ತು ಆರೋಪಗಳೆಲ್ಲಾ ಪೊಲೀಸರು ಹಾಗೂ ಬಿಜೆಪಿಯವರ ಸೃಷ್ಟಿಯಾಗಿದೆ. ಈಗಿರುವ ಪ್ರಶ್ನೆಯೆಂದರೆ ಈ ರೀತಿಯ ಕಟ್ಟಾ ಸಿಮಿ ಬೆಂಬಲಿಗನ ಸಂದರ್ಶನ ಪ್ರಸಾರ ಮಾಡುವ ಅಗತ್ಯವಾದರೂ ಏನಿತ್ತು? ಇಂತಹ ವ್ಯಕ್ತಿಗಳನ್ನು ನಾವು ಅನವಶ್ಯಕವಾಗಿ ವಿಶ್ವಾಸಾರ್ಹತೆ ನೀಡುತ್ತಿಲ್ಲವೇ?
ಅಲ್ಲದೆ ಡಾ ಫಲಾಹಿ ಅವರು ಓರ್ವ ಕಾರ್ಯನಿರತ ವೈದ್ಯರು. ಹೀಗಿರುವಾಗ ಅವರು ನಿರ್ಲಕ್ಷ್ಯಕ್ಕೆ ಒಳಗಾದವರು ಹೇಗಾಗುತ್ತಾರೆ? ಅಥವಾ ಅವರೋರ್ವ ಇಸ್ಲಾಮಿಕ್ ತೀವ್ರವಾದಿಯಾಗಿರಬಹುದೇ?
ಮಹಾರಾಷ್ಟ್ರದ ರತ್ನಗಿರಿಯ ಹಮೀದ್ ದಲ್ವಾಯ್ ಎಂಬ ಚಿಂತನಾರ್ಹ ಬರಹಗಳ ಲೇಖಕ ತಮ್ಮ -ಜಾತ್ಯಾತೀತ ಭಾರತದಲ್ಲಿ ಮುಸ್ಲಿಂ ರಾಜಕೀಯ' ಎಂಬ ಪುಸ್ತಕದಲ್ಲಿ ಭಾರತದಲ್ಲಿ ಮುಸ್ಲಿಂ ಕೋಮುವಾದಿತನದ ಸಮಸ್ಯೆಗಳನ್ನು ಅತ್ಯಾಸಕ್ತ ರೀತಿಯಲ್ಲಿ ವಿವರಿಸಿದ್ದಾರೆ. ಉಲ್ಕೆಯಂತೆ ಕಾಣಿಸಿಕೊಂಡ ಹಮೀದ್ ಉಲ್ಕೆಯಂತೆಯೇ ಮಾಯವಾದರು. ಪ್ರಸ್ತುತ ಸಮಸ್ಯೆಯ ಸಂದರ್ಭದಲ್ಲಿ ಅವರ ನುಡಿಗಳು ವಿವೇಕದ ನುಡಿಗಳಾಗುತ್ತಿತ್ತು. 44ರ ಎಳೆಯ ಹರೆಯದಲ್ಲೇ ಅವರು ನಿಧನರಾದರು. ಹೃದಯಪೂರ್ವಕವಾಗಿ ಸಮಾಜವಾದಿಯಾಗಿದ್ದ ಇವರು ಮುಸ್ಲಿಮರ ಸಾಮಾಜಿಕ ಸುಧಾರಣೆಗಾಗಿ, ವಿಶೇಷವಾಗಿ ಮುಸ್ಲಿಂ ಮಹಿಳೆಯರ ಹಕ್ಕಿನ ರಕ್ಷಣೆಗಾಗಿ ತನ್ನನ್ನೇ ಅಪರ್ಿಸಿಕೊಂಡವರು. ಮುಸ್ಲಿಂ ಸತ್ಯಶೋಧಕ ಮಂಡಲವನ್ನು ಸ್ಥಾಪಿಸಿದರು. ಈ ಹಿನ್ನೆಲೆಯಲ್ಲಿ ವೈಯಕ್ತಿವಾಗಿ ಹಲವು ಸಮಸ್ಯೆಗಳನ್ನು ಎದುರಿಸಿದರು.
ದಲ್ವಾಯ್ ಅವರ ಪ್ರಕಾರ, ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಂ ಸಮುದಾಯದ ಬಹಳಷ್ಟು ಮಂದಿ ಹಿಂದುಳಿದಿರುವುದು ಭಾರತೀಯ ಮುಸ್ಲಿಮರ ಸಮಸ್ಯೆಗಳಿಗೆ ಎಷ್ಟು ಕಾರಣವೋ, ವಿದ್ಯಾವಂತ ಮುಸ್ಲಿಮರು ತಮ್ಮ ಹಿರಿಯರಿಂದ ಬಂದ ಸಂಪ್ರದಾಯವನ್ನು ವಿಮಶರ್ಾತ್ಮಕವಾಗಿ ನಿಷ್ಕಷರ್ಿಸಲು ಒಪ್ಪದಿರುವುದೂ ಅಷ್ಟೇ ಕಾರಣವಾಗಿದೆ. ಹಿಂದೂಗಳಲ್ಲಿ
ಈ ರೀತಿಯ ಪರಿಸ್ಥಿತಿಯಿಲ್ಲ ಎಂದವರು ಅಭಿಪ್ರಾಯಿಸುತ್ತಾರೆ. ರಾಜಾರಾಮ ಮೋಹನರಾಯ್ರಿಂದ ಹಿಡಿದು ಜವಾಹರಲಾಲ್ ನೆಹರೂವರೆಗೆ, ಹಿಂದೂಗಳಲ್ಲಿ ಹಲವು ಬೌದ್ಧಿಕ ಚಿಂತಕರು ಹಿಂದೂಗಳ ಚಿಂತನಾ ಲಹರಿಯ ಮೇಲೆ ಪ್ರಭಾವ ಬೀರಲು ಯತ್ನಿಸಿದರು ಮತ್ತು ಇವರೆಲ್ಲರನ್ನೂ ತಮ್ಮ ನಾಯಕರೆಂದು ಬಹಳಷ್ಟು ಹಿಂದೂಗಳು ಒಪ್ಪಿಕೊಂಡಿದ್ದರು. ತಮ್ಮೆಲ್ಲಾ ಸಂಕಟಗಳಿಗೂ ಹಿಂದೂಗಳನ್ನು ದೂಷಿಸುವುದು ಭಾರತದ ಮುಸ್ಲಿಮರ ಹಳೇ ಚಾಳಿಯಾಗಿದೆ. ಏನೇ ಆದರೂ, ಭಾರತದ ಮುಸ್ಲಿಮ್ ಪ್ರಾಜ್ಞವರ್ಗದವರು ಎಂದಿಗೂ ವಿಮಶರ್ಾತ್ಮಕವಾಗಿ ಆತ್ಮನಿರೀಕ್ಷಣೆ ಮಾಡಿಕೊಂಡಿಲ್ಲ ಎಂದು ಚಾರಿತ್ರಿಕ ಹಿನ್ನೆಲೆಯ ಬಗ್ಗೆ ವಿಶ್ಲೇಷಿಸುತ್ತಾ ದಲ್ವಾಯ್ ಹೇಳುತ್ತಾರೆ. ಪೂರ್ವಗ್ರಹಿತ ಭಾವನೆ ಮತ್ತು ದ್ವೇಷವನ್ನು ಬೆಳೆಸುವ ಚರಿತ್ರೆಯು ನಮಗೆಲ್ಲಾ ಒಂದು ಕಂಟಕವಾಗಿದೆ ಎನ್ನುತ್ತಾರವರು. ನಾವು ಭೂತಕಾಲದಿಂದ ಬೆಳೆದು ಬಂದಿರುವ ನಮ್ಮ ಪೂರ್ವಗ್ರಹಿತ ಭಾವನೆಗಳ ಹಿಡಿತದಿಂದ ಹೊರ ಬರಬೇಕಾಗಿದೆ. ಇಂದಿನ ಬ್ರಾಹ್ಮಣರ ಪೂರ್ವಜರು ಅಸ್ಪೃಶ್ಯರನ್ನು ಅಮಾನವೀಯವಾಗಿ ನಡೆಸಿಕೊಂಡಿರಬಹುದು. ಆದರೆ ಇದು ಈಗಿನ ಪೀಳಿಗೆಯ ಬ್ರಾಹ್ಮಣ ಯುವಕರ ತಪ್ಪಲ್ಲ. ಅಂತೆಯೇ, ಮಹಮ್ಮದ್ ಘಜ್ನಿ ಅಥವಾ ಔರಂಗಜೇಬ್ ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯಕ್ಕೆ ಇಂದಿನ ಭಾರತದ ಮುಸ್ಲಿಮರು ಜವಾಬ್ದಾರರಲ್ಲ. ಅದೃಷ್ಟವಶಾತ್ ಹಿಂದೂಗಳ ಒಂದು ವರ್ಗವು ತಮ್ಮ ಪೂರ್ವಜರು ಮಾಡಿದ ತಪ್ಪಿನ ಹೊಣೆ ಹೊತ್ತುಕೊಂಡು, ಸಾಮಾಜಿಕ ಸಮಾನತೆ ಎಂಬುದನ್ನು ಮೂಲಭೂತ ಸಿದ್ಧಾಂತವಾಗಿ ಆದರದಿಂದ ಸ್ವೀಕರಿಸಲು ಸಿದ್ಧವಿದೆ. ಇದೇ ರೀತಿ ಔರಂಗಜೇಬ್ ಮತ್ತಿತರರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಮುಸ್ಲಿಮರ ವರ್ಗ ರೂಪುಗೊಳ್ಳಬೇಕಾಗಿದೆ. ಜಾತ್ಯಾತೀತ ನಾಗರೀಕತೆಯ ಕಲ್ಪನೆಯನ್ನು ಒಪ್ಪಿಕೊಳ್ಳಬೇಕಾಗಿದೆ. ಈ ರೀತಿಯ ಆಧುನಿಕ ಮನೋಭಾವದ, ಜಾತ್ಯಾತೀತ, ಕ್ರಿಯಾತ್ಮಕ, ಉದಾತ್ತ ಮನಸ್ಸಿನ ಒಂದು ವರ್ಗ ರೂಪುಗೊಳ್ಳುವುದು ಹಿಂದೂ ಮುಸ್ಲಿಂ ಕೋಮು ಸಮಸ್ಯೆಗೆ ಒಂದು ಪರಿಣಾಮಕಾರಿ ಉತ್ತರವಾಗಿದೆ.
ಹೀಗೆ, ಹಿಂದೂ ಸಮಾಜದೊಳಗೆ ಅದೆಷ್ಟೇ ಸಮಸ್ಯೆಗಳಿರಲಿ, ಆ ಸಮಾಜದಲ್ಲಿ ಆಧುನಿಕ ದೃಷ್ಟಿಕೋನದವರಿದ್ದಾರೆ. ಮುಸ್ಲಿಮರಲ್ಲಿ ಈ ಕೊರತೆಯಿದೆ ಮತ್ತು ಉಭಯ ಸಮಾಜದವರ ಹಿತದೃಷ್ಟಿಯಿಂದಲೂ ಮುಂಬರುವ ದಿನಗಳಲ್ಲಿ ಈ ಕೊರತೆ ನಿವಾರಣೆಯಾಗಬೇಕಿದೆ. ದಲ್ವಾಯ್ ಹಲವು ಮುಸ್ಲಿಮರ ಬಗ್ಗೆ ವಿವರಿಸಿದ್ದು ಇಲ್ಲಿ ಇದು ಅಪ್ರಸ್ತುತವಾಗಿದೆ. ಆದರೆ ಎಲ್ಲಿಯೂ ಅವರು ಯುವ ಜನತೆ ಸರಕಾರ ಅಥವಾ ಸಮಾಜದ ಮುಸ್ಲಿಮೇತರ ವ್ಯಕ್ತಿಗಳಿಂದ `ಮೂಲೆಗುಂಪು ಅಥವಾ ನಿರ್ಲಕ್ಷ್ಯಕ್ಕೊಳಗಾದ' ಕಾರಣ ಉದ್ವೇಗಕ್ಕೊಳಗಾಗಿದೆ ಎಂದು ಉಲ್ಲೇಖಿಸಲಿಲ್ಲ. ಆದರೆ ಅವರು ಈ ಪುಸ್ತಕ ಬರೆಯಲು ಪ್ರಮುಖ ಕಾರಣವೆಂದರೆ ` ಕೆಲವು ಅಗತ್ಯವಾದ ವಿಮಶರ್ಾತ್ಮಕ ಆತ್ಮನಿರೀಕ್ಷಣೆ ಮಾಡಿಕೊಂಳ್ಳುವ ಮೂಲಕ ವ್ಯವಸ್ಥಿತ ಹಾಗೂ ಪ್ರಾಂಜಲ ಮನಸ್ಸಿನಿಂದ ಚಚರ್ೆ ಆರಂಭಿಸಲು ನನ್ನ ಮುಸ್ಲಿಂ ಸೋದರರನ್ನು ಆಹ್ವಾನಿಸುವುದು' ಎಂದವರು ಹೇಳುತ್ತಾರೆ.
ಹೀಗೆ, ನಾಗೋರಿಯಂತವರು ಅಥವಾ ಹಫೀಝ್ ಮೊಹಮ್ಮದ್ ಸಯೀದ್ರಂತಹ ಶುದ್ಧ ಅವಿವೇಕಿಗಳು ವ್ಯಕ್ತಪಡಿಸುವ ಕಹಿ ಭಾವನೆಗಳಿಗೆ ಯಾವುದೇ ಸಹಜ ಕಾರಣಗಳಿಲ್ಲ. ಆದಾಗ್ಯೂ, ಮುಂಬೈಯಲ್ಲಿ ಮುಸ್ಲಿಮರಿಗೆ ಮನೆ ಬಾಡಿಗೆಗೆ ದೊರಕುವುದು ಕಷ್ಟವಾಗಿದೆ ಎಂಬುದು ವಾಸ್ತವ ಎಂದು ತನಗನಿಸಿದೆ ಎಂದು ಶಬನಾ ಆಜ್ಮಿ (ಭಾರತದ ಪ್ರದೀಪಮಯವಾದ ಚೇತನಗಳಲ್ಲಿ ಒಂದಾಗಿರುವ) ಹೇಳಿದ್ದಾರೆ ಎನ್ನಲಾಗಿದೆ. ಆದರೆ ಇದೇ ವೇಳೆ, ಭಾರತದ ಇನ್ನೋರ್ವ ಖ್ಯಾತ ಚೇತನ ನಸೀರುದ್ದೀನ್ ಶಾ ಅವರು ಇದನ್ನು ಸಂಪೂರ್ಣ ತಳ್ಳಿಹಾಕಿದ್ದಾರೆ. ಇಬ್ಬರೂ ಸರಿ ಹಾಗೂ ಇಬ್ಬರೂ ತಪ್ಪು. ಇದರರ್ಥ ಇಬ್ಬರದೂ ಅರ್ಧ ಸರಿ, ಅರ್ಧ ತಪ್ಪು. ಮುಸ್ಲಿಮೇತರ ಮನೆಯೊಡೆಯರು ಮುಸ್ಲಿಮರಿಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ ಉದಾಹರಣೆಗಳಿವೆ. ಆದರೆ ಈ ನಿರಾಕರಣೆಗೆ ಕಾರಣ ಏನು ಎಂಬುದನ್ನು ಅರಿತುಕೊಳ್ಳಲು ಈ ಸಮಾಜದವರಿಗೆ ಆಸಕ್ತಿಯಿಲ್ಲ ಎಂಬುದು ಇಲ್ಲಿ ಮುಖ್ಯವಾಗಿದೆ. ಕೆಲವರು ಪಕ್ಷಪಾತದ ಧೋರಣೆ ಹೊಂದಿರಬಹುದು. ಆದರೆ ಎಲ್ಲರದ್ದೂ ಏಕರೀತಿಯ ಧೋರಣೆ ಆಗಿರಲಿಕ್ಕಿಲ್ಲ. ಈ ಸಮಾಜದ ಮಂದಿಯೊಂದಿಗೆ ವ್ಯವಹರಿಸುವಾಗ ಮುಸ್ಲಿಮೇತರರಿಗೆ ಅನಿಶ್ಚಿತತೆಯ ಭಯ ಗುಪ್ತವಾಗಿ ಕಾಡುತ್ತಿರುತ್ತದೆ. ಕ್ರೆಡಿಟ್ ಕಾಡರ್್ ಸಂಸ್ಥೆ ಅಥವಾ ಬ್ಯಾಂಕ್ಗಳನ್ನು ಕೇಳಿ ನೋಡಿ. ಈ ಸಮಾಜದವರಿಂದ ಬಾಕಿ ವಸೂಲಿ ಕಷ್ಟವಾಗುತ್ತಿದೆ ಎಂಬ ಉತ್ತರ ಬಹುತೇಕ ಕೇಳಿ ಬರುತ್ತದೆ. ಈ ರೀತಿಯ ಹಲವು ಉದಾಹರಣೆಗಳಿವೆ. ಇವುಗಳಲ್ಲಿ ಎರಡು ಘಟನೆಗಳಿಗೆ ಯಾವುದೇ ಧೃಢೀಕರಣದ ಅಗತ್ಯವಿಲ್ಲ.
ಓರ್ವ ವ್ಯಕ್ತಿ ಮತ್ತಾತನ ಪತ್ನಿಯ ಮೇಲೆ ನಡೆಸಲಾದ ಮಾರಣಾಂತಿಕ ಹಲ್ಲೆಯಿಂದಾಗಿ ಆ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ. ಆತನ ಪತ್ನಿ ಹಲವು ವರ್ಷಗಳ ವರೆಗೂ ಕುಂಟುತ್ತಾ ನಡೆಯಬೇಕಾಯಿತು. ಇವರು ಮಾಡಿದ ತಪ್ಪೆಂದರೆ, ಯೂನಿಸ್ ಖಾನ್ ಎಂಬ ವ್ಯಕ್ತಿಗೆ ಕೊಟ್ಟ ಸಾಲವನ್ನು ವಾಪಾಸು ಕೇಳಿದ್ದು. ಇನ್ನೊಂದು ಘಟನೆ ನೋಡಿ. ಪೂಜಾ ಬೇಡಿ ಕ್ರೆಡಿಟ್ ಕಾಡರ್್ಗಾಗಿ ಸಲ್ಲಿಸಿದ ಅಜರ್ಿಯನ್ನು ಬ್ಯಾಂಕ್ `ಕಾಯ್ದಿರಿಸಿ'ಕೊಂಡಿತು. ಕೆಲ ವರ್ಷಗಳ ಹಿಂದೆ ಟೈಮ್ಸ್ ಆಫ್ ಇಂಡಿಯಾದ ಭಾನುವಾರದ ಸಂಚಿಕೆಯಲ್ಲಿ ಈ ಪ್ರಕರಣ ವರದಿಯಾಗಿತ್ತು. ಈ ಸಂದರ್ಭದಲ್ಲಿ ಆಕೆ ಇಬ್ರಾಹಿಂ ಎಂಬ ನಾಮಧೇಯದ ವ್ಯಕ್ತಿಯೋರ್ವನನ್ನು ವಿವಾಹವಾಗಿದ್ದಳು ಮತ್ತು ತನ್ನ ಹೆಸರನ್ನು ಪೂಜಾ ಬೇಡಿ ಇಬ್ರಾಹಿಂ ಎಂದು ಬದಲಿಸಿಕೊಂಡಿದ್ದಳು. ಅಜರ್ಿಯಲ್ಲಿ ಹೆಸರನ್ನು ಪೂಜಾ ಬೇಡಿ ಎಂದು ಬದಲಾಯಿಸಬಹುದೇ ಎಂದು ಕ್ರೆಡಿಟ್ ಕಾಡರ್್ ನೀಡುವ ಬ್ಯಾಂಕ್ ಕೇಳಿತು. ಆದರೆ ಆಕೆ ನಿರಾಕರಿಸಿದಳು. ಆದರೆ ತನ್ನ ಅಜರ್ಿಯನ್ನು `ಕಾದಿರಿಸಿದ' ಕ್ರಮಕ್ಕೆ ಆಕೆ ವಿವರಣೆ ಕೇಳಿದಾಗ `ತಮಗೆ ಸೂಚನೆ ಬಂದಿದೆ' ಎಂಬ ಉತ್ತರ ಬಂತು. ಹೀಗಿದೆ ಪರಿಸ್ಥಿತಿ. ಹೀಗಿರುವಾಗ ಇದನ್ನು ಮೂಲೆಗುಂಪು, ನಿರ್ಲಕ್ಷ್ಯ ಅಥವಾ ವಿಶ್ವಾಸಾರ್ಹತೆಯ ವಿಷಮ ಸ್ಥಿತಿ ಎನ್ನಬಹುದೇ?
ಆದ್ದರಿಂದ ಮುಕ್ತ ಮನೋಭಾವದ ಮುಸ್ಲಿಂ ನಾಯಕತ್ವದಿಂದ ವಿಶ್ವಾಸಾರ್ಹತೆ ವೃದ್ಧಿಸುವ ಕಾರ್ಯ ಸ್ವಯಂಪ್ರೇರಿತವಾಗಿ ನಡೆಯುವ ಅಗತ್ಯವಿದೆ. ಮುಕ್ತ ಮನೋಭಾವದ ಹಿಂದೂ ನಾಯಕತ್ವವು ಪರಸ್ಪರ ಸಮಾಜದ ಒಳಿತಿಗಾಗಿ ಕೈಜೋಡಿಸಲು ಖಂಡಿತಾ ಸಿದ್ಧವಿದೆ. ಇದರಿಂದ ಪ್ರಧಾನವಾಗಿ ಸಮಾಜದ ಧ್ಯೇಯ ಹಾಗೂ ನಿದರ್ಿಷ್ಟವಾಗಿ ಮುಸ್ಲಿಂ ಸಮುದಾಯದ ಧ್ಯೇಯದತ್ತ ಮುನ್ನಡೆಯುವ ಪ್ರಕ್ರಿಯೆಯ ಮೇಲೆ ಬಹುವಿಧದ ಪರಿಣಾಮ ಬೀರಬಲ್ಲದು. ಮಂಗಳೂರು ಮೂಲದ, ಮುಕ್ತ ಚಿಂತನೆಯ ಮುಸ್ಲಿಮರಾದ ಖಾದರ್ ಕುಕ್ಕಾಡಿ ಹೇಳುವಂತೆ, ಒಂದಂತೂ ಸ್ಪಟಿಕದಷ್ಟು ಸತ್ಯ. ಜನಸಂಖ್ಯೆಯ ಶೇ.20ರಷ್ಟು ಮಂದಿ ಅಲ್ಪಸಂಖ್ಯಾತರಿರುವ ಭಾರತದಂತಹ ದೇಶದಲ್ಲಿ, ಅಲ್ಪಸಂಖ್ಯಾತರು ಬಹುಸಂಖ್ಯಾತರ ವಿಶ್ವಾಸ ಗಳಿಸಿಕೊಳ್ಳದಿದ್ದರೆ ಬದುಕುಳಿಯುವ ನಿರೀಕ್ಷೆ ಇರಿಸಿಕೊಳ್ಳುವಂತಿಲ್ಲ. ಇನ್ನೊಂದೆಡೆ, ಈ ದೇಶವು 20 ಕೋಟಿಯಷ್ಟಿರುವ ಅಲ್ಪಸಂಖ್ಯಾತರು ಮೂಲಭೂತವಾದ ಪರಿವರ್ತನೆಯ ವಿವೇಚನೆ ಮತ್ತು ವೈರತ್ವದ ಧೋರಣೆ ಬಿಡುವವರೆಗೆ ಶಾಂತಿ ಮತ್ತು ಅಭಿವೃದ್ಧಿ ಕನಸಿನ ಮಾತಾಗಿದೆ ಎಂದು ಹಿಂದೂಗಳು ಅರಿತುಕೊಳ್ಳಬೇಕಾಗಿದೆ.
ಈ ಕುಕ್ಕಾಡಿ ಕುಟುಂಬದವರು ವ್ಯಾಪಾರಿಗಳು. ಉನ್ನತ ಮಟ್ಟದ ವೃತ್ತಿಪರರಾಗಿದ್ದು ಮುಕ್ತ ಮನೋಭಾವದವರು. ಇವರು ಸಮಾಜದ ಪ್ರಧಾನವಾಹಿನಿಯಲ್ಲಿ ಅದೆಷ್ಟು ಬೆರೆತುಕೊಂಡಿದ್ದಾರೆ ಎಂದರೆ ಸ್ವತಂತ್ರ ಭಾರತದ 61 ವರ್ಷಗಳ ಇತಿಹಾಸದಲ್ಲಿ ನಡೆದ ಯಾವುದೇ ಕೋಮು ಹಿಂಸೆಗಳು ಇವರನ್ನು ಸೋಕಲಿಲ್ಲ. ಜವಾಬ್ದಾರಿಯುತ, ಪ್ರತಿಕ್ರಿಯಾತ್ಮಕ ಸಾಮಾಜಿಕ ಬದುಕಿಗೆ ಒಂದು ಕನ್ನಡಿಯಾಗಿ ಇವರಿದ್ದಾರೆ. ಇವರಿಂದ ಸಹಧಮರ್ೀಯರು ಕೆಲವೊಂದನ್ನು ಕಲಿತು ಮುನ್ನಡೆಯಬೇಕು.
ಮೂಲೆಗುಂಪು ವಿಷಯಕ್ಕೆ ಬಂದರೆ, ಭಾರತೀಯ ಮುಸ್ಲಿಮರು, ಮುಸ್ಲಿಮರಾಗಿದ್ದುಕೊಂಡೂ ಮಧ್ಯ ಪೂರ್ವ ರಾಷ್ಟ್ರಗಳಿಗೆ ಸಂಚರಿಸುವ ಉತ್ತಮ ಅವಕಾಶವನ್ನು ಖಂಡಿತಾ ಪಡೆದಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಈ ದೇಶದ ಮುಸ್ಲಿಮರ ಬಗ್ಗೆ ಮಧ್ಯಪೂರ್ವ ರಾಷ್ಟ್ರಗಳ ನೀತಿ.. ಹಾಗೂ ಹಲವು ಮುಸ್ಲಿಮರು ಈ ಅವಕಾಶ ಪಡೆದುಕೊಂಡು ಆಥರ್ಿಕವಾಗಿ ಅಭಿವೃದ್ಧಿ ಹೊಂದಿದರು.
ಆದರೆ ಇಲ್ಲಿ ಪಡೆದ ಆಥರ್ಿಕ ಲಾಭವನ್ನು ಅವರು ತಮ್ಮ ಸಮಾಜದ, ಕಡಿಮೆ ಅದೃಷ್ಟ ಹೊಂದಿದ ಸೋದರರ ಶೈಕ್ಷಣಿಕ , ಸಾಮಾಜಿಕ-ಆಥರ್ಿಕ ಸ್ಥಿತಿಯನ್ನು ಸುಧಾರಿಸುವ ಪ್ರಕ್ರಿಯೆಗೆ ಬಳಕೆಯಾಗಲಿಲ್ಲ. ನಿಜವಾಗಿ ಹೇಳಬೇಕೆಂದರೆ ಈ ಹಣ ಸಾಮಾಜಿಕ ಸಾಮರಸ್ಯ ಕೆಡಿಸುವ ಉದ್ದೇಶಕ್ಕೆ ಬಳಕೆಯಾಯಿತು. ಮರಾಡ್ ವಿವಾದದ ಬಗ್ಗೆ ಆಗಿನ ಕೇರಳ ಮುಖ್ಯಮಂತ್ರಿ ನೀಡಿದ ಪ್ರತಿಕ್ರಿಯೆ-ಅಲ್ಪಸಂಖ್ಯಾತ ಸಮುದಾಯದವರು ತಮ್ಮ ಹಣಬಲದಿಂದ ರಾಜಕೀಯ ಮಾಡುತ್ತಿದ್ದಾರೆ ಎಂಬುದಿಲ್ಲಿ ಗಮನಾರ್ಹವಾಗಿದೆ.
ಈ ಹಿನ್ನೆಲೆಯಲ್ಲಿ ಮುಸ್ಲಿಮರು ಹಿಂದುಳಿದಿದ್ದಾರೆ, ಮೂಲೆಗುಂಪಾಗಿದ್ದಾರೆ ಎಂದು ಕಂಬಳಿ ಹಾಸಿಬಿಡುವ ಹೇಳಿಕೆ ನೀಡಿ, ಆ ಬಳಿಕ ಅವರ ಸಾಮಾಜಿಕ-ಆಥರ್ಿಕ ಸ್ಥಾನಮಾನದ ಬಗ್ಗೆ ಅಧ್ಯಯನ ನಡೆಸುವಂತೆ ನಿವೃತ್ತ ನ್ಯಾಯಾಧೀಶರಿಗೆ ಸೂಚಿಸುವುದು ದೇಶದ ಇನ್ನೊಂದು ಹಿಂದುಳಿದ ಪಂಗಡದ ಸಮಸ್ಯೆಯ ಜೊತೆ ಆಟವಾಡುವಂತಾಗಿದೆ. ಈ ಇನ್ನೊಂದು ಹಿಂದುಳಿದ ಪಂಗಡದವರಿಗೆ ಉತ್ತಮ ಅವಕಾಶಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶವೂ ಕನಿಷ್ಠವಾಗಿದೆ.
ಕಿವಿಗೊಡಿ.... ದಿಲ್ಲಿಯಲ್ಲಿರುವ ಯಾರಾದರೂ ಇದನ್ನು ಕೇಳಿಸಿಕೊಳ್ಳುತ್ತಿದ್ದಾರೆಯೇ..?
ಮುಸ್ಲಿಮರು ದೇಶದಲ್ಲಿ ನಿರ್ಲಕ್ಷಿಸಲ್ಪಟ್ಟಿದ್ದಾರೆಯೇ..?
ಪಿ.ಎ.ಖಾದರ್ ಕುಕ್ಕಾಡಿ
ಈ ಪ್ರಶ್ನೆಯನ್ನು ಯೋಗ್ಯ ಕ್ರಮದಲ್ಲಿ ಕೇಳಬೇಕಾದರೆ ಮೊದಲು, ಭಾರತದಲ್ಲಿ ಮುಸ್ಲಿಮರು ಮಾತ್ರ ನಿರ್ಲಕ್ಷಿಸಲ್ಪಟ್ಟ ಪಂಗಡವಲ್ಲ ಎಂಬುದನ್ನು ಗಮನಿಸಬೇಕಾಗಿದೆ. ನಿಜವಾಗಿ ಮೂಲೆಗುಂಪು ಮಾಡಲ್ಪಟ್ಟವರು ದೇಶದ ದಲಿತರು, ಬುಡಕಟ್ಟು ಜನಾಂಗದವರು ಹಾಗೂ ಗ್ರಾಮೀಣ ಮತ್ತು ಹಳ್ಳಿ ಪ್ರದೇಶದ ಕೋಟಿಗಟ್ಟಲೆ ಬಡಜನರು. ಆದಾಗ್ಯೂ, ಹಿಂದೂ ಮತ್ತು ಮುಸ್ಲಿಮರ ನಡುವಿನ ಒಡಕು ಹೆಚ್ಚು ಸುದ್ದಿ ಮಾಡುತ್ತದೆ ಯಾಕೆಂದರೆ ಈ ಒಡಕು ಯಾವಾಗಲೂ ಹಿಂಸಾತ್ಮಕ ಘರ್ಷಣೆಯ ಮೂಲಕ ವ್ಯಕ್ತವಾಗುತ್ತದೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತದೆ.
ಅಲ್ಲದೆ, ಮುಸ್ಲಿಮರ ವಿಮುಖತೆ ಸ್ವಾತಂತ್ರೋತ್ತರ ಭಾರತದ ಒಂದು ಪ್ರಮುಖ ವಿಷಯವಾಗಿದೆ. ಬ್ರಿಟಿಷರು ಒಡೆದು ಆಳುವ ನೀತಿಯ ಮೂಲಕ ಈ ದ್ವೇಷ ಎಂಬ ವಿಷ ಬೀಜ ಬಿತ್ತಿದರು. ಈ ಹಿಂದಿನ ತಥಾಕಥಿತ ಮುಸ್ಲಿಮರ ಆಡಳಿತ ಕಾಲದ ಭಾರತದಲ್ಲಿ ಎರಡೂ ಸಮುದಾಯದ ಜನರ ನಡುವಿನ ಸಂಬಂಧ ಶಾಂತಿಯುತವಾಗಿತ್ತು. ಹಿಂದೂ ಮತ್ತು ಮುಸ್ಲಿಂ ರಾಜರ ಮಧ್ಯೆ ಯುದ್ಧ ನಡೆಯುತ್ತಿತ್ತು. ಆದರೆ ಇದು ರಾಜಕೀಯ ಕಾರಣಕ್ಕಾಗಿ ನಡೆಯುವ ಯುದ್ದವಾಗಿತ್ತು. ಧಾಮರ್ಿಕ ಹಿನ್ನೆಲೆಯ ಯುದ್ದವಾಗಿರಲಿಲ್ಲ. ಮುಸ್ಲಿಂ ಚಕ್ರವತರ್ಿಗಳು ಕೂಡಾ ಭಾರತದಲ್ಲಿ ಇಸ್ಲಾಂ ಧರ್ಮವನ್ನು ಹೇರಲು ಮುಂದಾಗಲಿಲ್ಲ ಎಂಬುದು ಈ ಮಾತಿಗೆ ಸಾಕಷ್ಟು ಪುಷ್ಟಿ ನೀಡುತ್ತದೆ. ಇನ್ನೊಂದೆಡೆ, ಮಧ್ಯಯುಗದಲ್ಲಿ ಹಿಂದೂ ರಾಜರಿಗೆ ಮತ್ತು ಮುಸ್ಲಿಂ ರಾಜರಿಗೆ ಆಗಾಗ ಯುದ್ದ ನಡೆಯುತ್ತಿತ್ತು `ಜಾತ್ಯಾತೀತತೆಗೆ' . ಮತ್ತೊಂದು ಉದಾಹರಣೆಯೆಂದರೆ, ಆ ಸಂದರ್ಭದಲ್ಲಿ ಮುಸ್ಲಿಂ ರಾಜರ ಆಡಳಿತದಲ್ಲಿ ಬಹಳಷ್ಟು ಮಂದಿ ಹಿಂದೂ ಮಂತ್ರಿಗಳು, ಸೇನಾಧಿಪತಿಗಳಿದ್ದರು. ಅಂತೆಯೇ, ಹಿಂದೂ ರಾಜರ ಆಡಳಿತದಲ್ಲಿ ಮುಸ್ಲಿಂ ಮಂತ್ರಿಗಳು, ಸೇನಾಧಿಪತಿಗಳಿದ್ದರು.
ಈ ಎರಡು ಪ್ರಮುಖ ಸಮುದಾಯಗಳ ನಡುವಿನ ಇಂದಿನ ವೈರತ್ವದ ಮೂಲ-1947ರ ಭಾರತ ವಿಭಜನೆ ಹಾಗೂ ಪಾಕಿಸ್ತಾನದ ಹುಟ್ಟು. ಸ್ವಾತಂತ್ರ್ಯ ಪಡೆಯಬೇಕೆಂಬ ಆತುರದಲ್ಲಿ ಸ್ವಾತಂತ್ರ್ಯ ಚಳುವಳಿಯ ನಾಯಕರು ಗಾಂಧೀಜಿಯವರು ಎತ್ತಿದ ವಿರೋಧದ ದ್ವನಿಯನ್ನು ನಿರ್ಲಕ್ಷಿಸಿ ವಿಭಜನೆಯನ್ನು ಒಪ್ಪಿಕೊಂಡುಬಿಟ್ಟರು. ತರುವಾಯ ಸಂಭವಿಸಿದ್ದು ಭೀಕರ ರಕ್ತಪಾತ. ಹಿಂಸಾತ್ಮಕ ದೊಂಬಿಗೆ ಸಾವಿರಾರು ಮುಗ್ಧ ಮಹಿಳೆಯರು, ಮಕ್ಕಳು, ಪುರುಷರು ಬಲಿಯಾದರು. ಭಾರತ-ಪಾಕ್ ನಡುವಿನ ಗಡಿಯಾಚೆಗಿನ ವಲಸೆ ಸಂದರ್ಭದಲ್ಲಿ ಮಿಲಿಯಗಟ್ಟಲೆ ಜನ ತೊಂದರೆಗೊಳಗಾದರು. ಈ ಎಲ್ಲಾ ದುರಂತ ನಾಟಕಗಳು ಉಪಖಂಡದ ಜನತೆಯ ಮನದಲ್ಲಿ ಮಾಯದ ಗಾಯವನ್ನು ನಿಮರ್ಿಸಿದವು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದೂ-ಮುಸ್ಲಿಂ ಭಾಂದವ್ಯವನ್ನು ಹಾಳೆಗಡಹಿದ ಪ್ರಮುಖಪ್ರಕರಣವೆಂದರೆ ಬಾಬ್ರಿ ಮಸೀದಿಯನ್ನು ದ್ವಂಸಗೊಳಿಸಿದ್ದು ಹಾಗೂ ಆ ಬಳಿಕದ ಹಿಂಸಾಚಾರ, ದೇಶದ ವಿವಿಧೆಡೆ ನಡೆದ ಉಗ್ರಗಾಮಿಗಳ ದಾಳಿ. ಕೆಲವು ಸಿನಿಕ ರಾಜಕಾರಣಿಗಳು, ಅಧಿಕಾರದ ಆಸೆಗಾಗಿ, ಇನ್ನೂ ವೋಟ್ಬ್ಯಾಂಕ್ ರಾಜಕೀಯದಲ್ಲಿ ತೊಡಗಿಕೊಂಡಿದ್ದು, ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಅಂತೆಯೇ ನಿರಂತರವಾಗಿ ನಡೆಯುತ್ತಿರುವ ಉಗ್ರವಾದಿಗಳ ದಾಳಿಗಳು ಭಾರತದ ಅಭಿವೃದ್ಧಿಗೆ ತಡೆ ಉಂಟುಮಾಡುತ್ತಿರುವಂತೆಯೇ ದೇಶದ ಪ್ರತಿಷ್ಠೆಗೂ ಘಾಸಿ ಎಸಗುತ್ತಿದೆ.
ದೇಶದ ಬಹುತೇಕ ಜನ ಬಡವರಾಗಿದ್ದು, ಅಜ್ಞಾನ ಮತ್ತು ಮೂಢನಂಬಿಕೆಯುಳ್ಳವರಾಗಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ವಿಶ್ವದ ಎಲ್ಲಾ ಸಾಮಾನ್ಯ ಜನರಂತೆಯೇ ಇವರೂ ಹಿಂಸೆ ಮತ್ತು ಅನ್ಯಾಯ ಕಂಡರೆ ಹೇಸುತ್ತಿದ್ದಾರೆ. ವಾಸ್ತವವಾಗಿ, ಕೆಲ ರಾಜಕೀಯ ಮುಖಂಡರು ಸುಳ್ಳು ಭರವಸೆಯ ಮೂಲಕ ಸಾಮಾನ್ಯ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಯಾವುದೇ ಮುಲಾಜಿಲ್ಲದೆ ಈ ದೇಶದ್ರೋಹೀ ಶಕ್ತಿಗಳನ್ನು ಮೂಲೋಚ್ಛಾಟನೆ ಮಾಡುವುದೇ ಈ ಸಮಸ್ಯೆಗಿರುವ ಪರಿಹಾರವಾಗಿದೆ.
ದೀಘರ್ಾವಧಿ ಹಾಗೂ ಕ್ಷಿಪ್ರಾವಧಿಯ ಕೆಲವು ಕಾರ್ಯಕ್ರಮಗಳ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುತ್ತಿದೆ.
ಕ್ಷಿಪ್ರಾವಧಿಯ ಕಾರ್ಯಕ್ರಮದಲ್ಲಿ ಕೋಮು ಹಿಂಸೆ ಮತ್ತು ದೊಂಬಿಯನ್ನು ಆರಂಭಿಕ ಹಂತದಲ್ಲೇ ಹತ್ತಿಕ್ಕುವ ಕ್ರಮವನ್ನು ಕಾನೂನು ಅನುಷ್ಠಾನಾಧಿಕಾರಿಗಳು ಕೈಗೊಳ್ಳಬೇಕು. ರಾಜಕೀಯ ಮುಖಂಡರು ಸ್ವಾರ್ಥ ರಾಜಕಾರಣದ ಮಟ್ಟವನ್ನು ಮೀರಿ ನಿಲ್ಲಬೇಕು. ದೀಘರ್ಾವಧಿಯ ಕಾರ್ಯಕ್ರಮದಲ್ಲಿ ನಮ್ಮ ಶೈಕ್ಷಣಿಕ ಕ್ರಮದಲ್ಲಿ ಕೋಮು ದುರಾಗ್ರಹ ಮತ್ತು ಧಾಮರ್ಿಕ ನಂಬಿಕೆಯ ಪಠ್ಯಗಳಿಗೆ ಮಹತ್ವ ನೀಡಬಾರದು. ಕೋಮು ವೈರಸ್ನಿಂದ ಬಾಧಿತರಾಗಿರುವ ಶಿಕ್ಷಕರು ಮತ್ತು ಪಠ್ಯಪುಸ್ತಕಗಳನ್ನು ದೂರಮಾಡಬೇಕು. ಸರಕಾರಿ ಶಾಲಾ ಕಾಲೇಜುಗಳ ವೈಫಲ್ಯದಿಂದ ಜಾತಿ ಮತ್ತು ಪಂಗಡ ಆಧಾರಿತ ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಂಡಿರುವುದು ವಿಷಾದನೀಯವಾಗಿದೆ.
ದೇಶಭಕ್ತಿ ಮತ್ತು ಜಾತ್ಯಾತೀತತೆಯ ಧ್ಯೇಯವನ್ನು ವೃದ್ಧಿಸುವಲ್ಲಿ ಬೌದ್ಧಿಕ ಚಿಂತಕರ ಪಾತ್ರ ಮಹತ್ತರವಾಗಿದೆ. ದೇಶದಲ್ಲಿ ಈ ರೀತಿಯ ಚಿಂತಕರು, ಲೇಖಕರು, ನಾಯಕರು, ಕಲಾವಿದರ ಕೊರತೆ ಖಂಡಿತಾ ಇಲ್ಲ. ಆದರೆ ಸುದ್ದಿ ಮತ್ತು ದೃಶ್ಯ ಮಾಧ್ಯಮದಲ್ಲಿರುವ ಸಣ್ಣ ಬುದ್ಧಿಯ ಕೆಲ ಶಕ್ತಿಗಳ ಎದುರು ಇವರ ದ್ವನಿ ಕೇಳಿಸುತ್ತಿಲ್ಲ. ಸಾರ್ವಜನಿಕ ಮಾಧ್ಯಮಗಳು ನಡೆಸುವ ಈ ರೀತಿಯ ಕುಚೋದ್ಯಕ್ಕೆ ಸರಕಾರ ಅಂಕುಶ ಹಾಕದಿದ್ದರೆ ಭವಿಷ್ಯದ ದಿನಗಳು ಖಂಡಿತಾ ಕರಾಳವಾದೀತು . ಕೋಮುವಾದವನ್ನು ಕೊನೆಗೊಳಿಸಿ, ರಾಷ್ಟ್ರೀಯ ಸಮಗ್ರತೆಗೆ ಒತ್ತಾಸೆ ನೀಡಬೇಕಾದರೆ ನಮ್ಮ ಸಂವಿಧಾನದಲ್ಲಿ ಹೆಚ್ಚು ಒತ್ತು ನೀಡಿರುವ ಜಾತ್ಯಾತೀತ , ಸಾಮಾಜಿಕ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಆಚರಣೆಗೆ ತರಬೇಕಾಗಿದೆ. ಇದಕ್ಕಿರುವ ಬಹುದೊಡ್ಡ ತೊಡಕೆಂದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಕಾನೂನು ಅನುಷ್ಠಾನ ಸಮಿತಿಯ ಅಸಮರ್ಪಕತೆ. ನಮ್ಮೆಲ್ಲಾ ಸಮಸ್ಯೆಗಳಿಗೆ ಮೂಲ ಪರಿಹಾರವೆಂದರೆ ಸಮಾನತೆಯ ಸಮಾಜವನ್ನು ಸ್ಥಾಪಿಸುವುದು, ಪುರೋಹಿತಶಾಹಿ ರಾಜ್ಯವಲ್ಲ.
ಒಂದಂತೂ ಸ್ಪಟಿಕದಷ್ಟು ಸತ್ಯ. ಜನಸಂಖ್ಯೆಯ ಶೇ.20ರಷ್ಟು ಮಂದಿ ಅಲ್ಪಸಂಖ್ಯಾತರಿರುವ ಭಾರತದಂತಹ ದೇಶದಲ್ಲಿ, ಅಲ್ಪಸಂಖ್ಯಾತರು ಬಹುಸಂಖ್ಯಾತರ ವಿಶ್ವಾಸ ಗಳಿಸಿಕೊಳ್ಳದಿದ್ದರೆ ಬದುಕುಳಿಯುವ ನಿರೀಕ್ಷೆ ಇರಿಸಿಕೊಳ್ಳುವಂತಿಲ್ಲ. ಇನ್ನೊಂದೆಡೆ, ಈ ದೇಶವು 20 ಕೋಟಿಯಷ್ಟಿರುವ ಅಲ್ಪಸಂಖ್ಯಾತರು ಮೂಲಭೂತವಾದ ಪರಿವರ್ತನೆಯ ವಿವೇಚನೆ ಮತ್ತು ವೈರತ್ವದ ಧೋರಣೆ ಬಿಡುವವರೆಗೆ ಶಾಂತಿ ಮತ್ತು ಅಭಿವೃದ್ಧಿ ಕನಸಿನ ಮಾತಾಗಿದೆ ಎಂದು ಹಿಂದೂಗಳು ಅರಿತುಕೊಳ್ಳಬೇಕಾಗಿದೆ.
ಮುಗಿಸುವ ಮುನ್ನ- ಇಲ್ಲಿ ಹತಾಶೆಗೆ ಯಾವುದೇ ಕಾರಣವಿಲ್ಲ ಎನಿಸುತ್ತದೆ. ವಿವೇಕ ಉಳಿಯುತ್ತದೆ ಎಂದು ಆಶಿಸೋಣ ಯಾಕೆಂದರೆ ಮೈದಾನದಲ್ಲಿರುವವರಲ್ಲಿ ಹೆಚ್ಚಿನವರು ಇನ್ನೂ ಜಾತ್ಯಾತೀತತೆಯ ಪರವಿದ್ದಾರೆ.

No comments:

Post a Comment